Kele Cheluve Songtext
von Vijay Prakash
Kele Cheluve Songtext
ಕೇಳೇ ಚೆಲುವೆ
ನಿನ್ನ ಪಾದದಲ್ಲಿ
ಧೂಳಾಗಿ, ನೀ ನಡೆವಾಗ
ಕಚಗುಳಿ ನಾ ಇಡುವೇ
ಕೇಳೇ ಚೆಲುವೆ
ನೀನು ಮೀನು ಮೀನು ಮಿನುಗು ತಾರೆ
ಝುಳು ಝುಳು ಹರಿಯುವ ರಸ ಜಲಧಾರೆ
ನನ್ನ ಕಣ ಕಣದಲ್ಲೂ ನೀನೇ ನೀನೇ ತುಂಬಿರುವೆ ಮನಸಾರೆ
ಬಳುಕಾಡಿ ನೀ ಬರುವಾಗ ಸ್ವರ್ಗವೇ ನಾಚುತಿದೆ
ಕೇಳೇ ಚೆಲುವೆ
ಹಂಸಗಮನೆಯೇ ನಿನ್ನ ಹಂಸದ ನಡಿಗೆಗೆ ನಡಿಗೆಗೆ
ಸೋತೇ ಸೆಳೆಯುವ ಮಧುರ ಮಾತಿನ ಸೊಗಡಿಗೆ ಬೆಡಗಿಗೆ
ನೀನು ನಿಂತಲ್ಲೇ ನಿಲ್ಲದೆ
ಅಲ್ಲಿ ಕೆಂಪನೆ ಗಲ್ಲವ ಗಿಲ್ಲಿ
ನೊಟದಲ್ಲೇ ಕೊಲುವಾಗ ತಲ್ಲಣವಾಗುತಿದೆ
ಕೇಳೇ ಚೆಲುವೆ
ಧಮನಿ ಧಮನಿ
ಕರೆವಾ ಹೆಸರೇ ನೀ ತರುಣಿ
ಕರೆವಾ ಹೆಸರೇ ನೀ ತರುಣಿ
ಕೋಮಲಾಂಗಿಯೇ ನನ್ನ ಮನದೊಳು ಇಣುಕಿದೆ ಕೆಣಕಿದೆ
ಕೇಶರಾಶಿಯು ಇರುಳು ಆದರೆ ಮೊಗದಲಿ ಬೆಳಕಿದೆ
ನಿನ್ನ ಮಾತಿನ ಪ್ರವಾಹದಲ್ಲಿ
ಸುಳ್ಳಿನ ಪ್ರಭಾವ ಚೆಲ್ಲಿ
ಹೊಗಳಿಕೆ ನೀ ಸುರಿವಾಗ
ನಂಬಲು ಆಗುವುದೇ
ಕೇಳೇ ಚೆಲುವೆ
ನಿನ್ನ ಪಾದದಲ್ಲಿ
ಧೂಳಾಗಿ, ನೀ ನಡೆವಾಗ
ಕಚಗುಳಿ ನಾ ಇಡುವೇ
ಕೇಳೇ ಚೆಲುವೆ
ನೀನು ಮೀನು ಮೀನು ಮಿನುಗು ತಾರೆ
ಝುಳು ಝುಳು ಹರಿಯುವ ರಸ ಜಲಧಾರೆ
ನನ್ನ ಕಣ ಕಣದಲ್ಲೂ ನೀನೇ ನೀನೇ ತುಂಬಿರುವೆ ಮನಸಾರೆ
ಬಳುಕಾಡಿ ನೀ ಬರುವಾಗ ಸ್ವರ್ಗವೇ ನಾಚುತಿದೆ
ಕೇಳೇ ಚೆಲುವೆ
ಹಂಸಗಮನೆಯೇ ನಿನ್ನ ಹಂಸದ ನಡಿಗೆಗೆ ನಡಿಗೆಗೆ
ಸೋತೇ ಸೆಳೆಯುವ ಮಧುರ ಮಾತಿನ ಸೊಗಡಿಗೆ ಬೆಡಗಿಗೆ
ನೀನು ನಿಂತಲ್ಲೇ ನಿಲ್ಲದೆ
ಅಲ್ಲಿ ಕೆಂಪನೆ ಗಲ್ಲವ ಗಿಲ್ಲಿ
ನೊಟದಲ್ಲೇ ಕೊಲುವಾಗ ತಲ್ಲಣವಾಗುತಿದೆ
ಕೇಳೇ ಚೆಲುವೆ
ಧಮನಿ ಧಮನಿ
ಕರೆವಾ ಹೆಸರೇ ನೀ ತರುಣಿ
ಕರೆವಾ ಹೆಸರೇ ನೀ ತರುಣಿ
ಕೋಮಲಾಂಗಿಯೇ ನನ್ನ ಮನದೊಳು ಇಣುಕಿದೆ ಕೆಣಕಿದೆ
ಕೇಶರಾಶಿಯು ಇರುಳು ಆದರೆ ಮೊಗದಲಿ ಬೆಳಕಿದೆ
ನಿನ್ನ ಮಾತಿನ ಪ್ರವಾಹದಲ್ಲಿ
ಸುಳ್ಳಿನ ಪ್ರಭಾವ ಚೆಲ್ಲಿ
ಹೊಗಳಿಕೆ ನೀ ಸುರಿವಾಗ
ನಂಬಲು ಆಗುವುದೇ
ಕೇಳೇ ಚೆಲುವೆ
Writer(s): Anup Bhandari Lyrics powered by www.musixmatch.com