Songtexte.com Drucklogo

O Meghave Meghave Songtext
von S. P. Balasubrahmanyam & K. S. Chithra

O Meghave Meghave Songtext

ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವನಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ


ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳತಿ ಓದುವೆಯಾ?
ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳೆಯ ಓದುವೆಯಾ?
ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ?
ಇದು ಓದೋ ಓಲೆಯಲ್ಲ ಬರೆದುಕೋ
ನನ್ನ ಜೀವ ನಿನದೇ ಎಂದುಕೋ
ನಿನ್ನ ಮನದ ಮನೆಗೆ ತಂದುಕೋ
ಈ ಕಂಗಳ ಮುಂಬಾಗಿಲ
ಬಾ ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪಾತ್ರಕೆ ವಂದನೆ

ಮುಗಿಲೇ ಬೆಳ್ಳ್ಮುಗಿಲೇ ತಂಪೆಲರೆ ತಳಿರೆ
ಹಗಲೇ ಹಗಲಿರುಳೇ ನಿನ್ನೆದುರು ನಾವೊಬ್ಬರೆ
ವನವೇ ಕಾನನವೇ ಹೂ ಬನವೇ ಹಸಿರೆ
ಗಿರಿಯೇ ನೀರ್ಝರಿಯೇ ನಮ್ಮೊಳಗೆ ನಿಮ್ಮುಸಿರೆ
ಈ ಒಲವಿನ ಕಣ್ಣಲಿ ಸರ್ವವೂ ಸುಂದರ
ಇಲ್ಲಿ ಬಾನು ಭೂಮಿಗಿಲ್ಲ ಅಂತರ
ನಾನು ನೀನು ಇಲ್ಲ ನಮ್ಮಲಿ
ಒಂದೇ ಜೀವ ಜೋಡಿ ಒಡಲಲಿ
ಈ ಕಂಗಳ ಮುಂಬಾಗಿಲ
ನಾ ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪಾತ್ರಕೆ ವಂದನೆ
ಈ ಕಂಗಳ ಮುಂಬಾಗಿಲ
ನಾ ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪತ್ರಕೆ ವಂದನೆ

Songtext kommentieren

Log dich ein um einen Eintrag zu schreiben.
Schreibe den ersten Kommentar!

Beliebte Songtexte
von S. P. Balasubrahmanyam & K. S. Chithra

Quiz
Wer will in seinem Song aufgeweckt werden?

Fans

»O Meghave Meghave« gefällt bisher niemandem.