Songtexte.com Drucklogo

Yaaro Yaaro Geechihoda Songtext
von K. J. Yesudas

Yaaro Yaaro Geechihoda Songtext

ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯಾ ಬರಹ

ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ಧಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
ಕತ್ತಲಲಿ ಆ ಬ್ರಹ್ಮನು ಮರೆತ
ಪ್ರೀತಿಯ ಎರಡಕ್ಷರದ ಮಾತೊಂದ
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ

ಗುಡಿಯಲ್ಲಿರೋ ಈ ಪ್ರೀತಿಯನು ಯಾರಿಟ್ಟರು ಆ ಗುಡಿಸಲಲಿ
ಒಲುಮೆಯೆಂಬ ಕುಲುಮೆಯಲಿ, ಬೆಂದರೂ ಸ್ವರ್ಗಾನೇ ನಿನಗಲ್ಲಿ
ಸುಳ್ಳು ಕನಸುಗಳ ಮುಂದೆ ಹಿಂದೆ
ಸತ್ಯ ಮರೆತವನೇ ಹುಚ್ಚ ಎಂದೆ
ಸಾವಿರದ ಪ್ರೀತಿಯಿದು


ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ
ಧಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ

ಭೂಮಿಯ ಹಸಿವಿಗೆ ಮಳೆ ಸುರಿದು, ಬೆಳೆಯ ಕೊಡದೇನೆ ಹೂಗುವುದೇ
ದಡಗಳ ಸೋಕುವ ಅಲೆ ಅಲೆಯು, ಮೈ ತೊಳೆಯದಲೇ ಹೋಗುವುದೇ
ಪ್ರೀತಿ ಜಗಕ್ಕೆ ಎಂದು ಹುಚ್ಚು ಹುಚ್ಚು
ಅನ್ನೋ ಹುಚ್ಚುತನ ಎಂದೂ ಹುಚ್ಚು
ಸಾಯಿಸುವ ಪ್ರೀತಿಯಿದು

ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ
ಧಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
ಕತ್ತಲಲಿ ಆ ಬ್ರಹ್ಮನು ಮರೆತ
ಪ್ರೀತಿಯ ಎರಡಕ್ಷರದ ಮಾತೊಂದ

ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ಧಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ

Songtext kommentieren

Log dich ein um einen Eintrag zu schreiben.
Schreibe den ersten Kommentar!

Quiz
Welcher Song ist nicht von Britney Spears?

Fans

»Yaaro Yaaro Geechihoda« gefällt bisher niemandem.